ಉಡುಪಿ ಜಿಲ್ಲೆಯ ಅಧಿಕೃತ ವೆಬ್ ಸೈಟ್ ಗೆ ಸ್ವಾಗತ

ಉಡುಪಿ ಜಿಲ್ಲೆಯು ಕರ್ನಾಟಕ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿದೆ. ಉಡುಪಿ ಜಿಲ್ಲೆಯು ಮುಖ್ಯವಾಗಿ ಶ್ರೀ ಕೃಷ್ಣ ಮಠಕ್ಕೆ ಪ್ರಸಿದ್ಧಿಯನ್ನು ಪಡೆದಿದೆ. ಉಡುಪಿಯು ವಿಶ್ವದಾದ್ಯಂತ ಪ್ರಸಿದ್ಧವಾಗಿರುವ ಪಾಕಪದ್ಧತಿಯಲ್ಲಿ ಹೆಸರನ್ನು ಸಂಪಾದಿಸಿದೆ.

ಉಡುಪಿ ಜಿಲ್ಲೆಯು ದೇವಾಲಯ,ಉತ್ಸವಗಳು ಮತ್ತು ಆಚರಣೆಗಳು ಯಕ್ಷಗಾನ,ಭೂತದ ಕೋಲ,ನಾಗಮಂಡಲ, ಇತ್ಯಾದಿ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಾಜ್ಯದಲ್ಲಿಯೇ ವಿಶೇಷ ಸ್ಥಾನವನ್ನು ಪಡೆದಿದೆ. ಉಡುಪಿ ಜಿಲ್ಲೆಯು 25/08/1997 ರಲ್ಲಿ ಉದಯವಾಯಿತು. ಉಡುಪಿ ಜಿಲ್ಲೆಯು ಈ ಹಿಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉತ್ತರ ದಿಕ್ಕಿನಲ್ಲಿದ್ದ ಮೂರು ತಾಲ್ಲೂಕುಗಳು ಅಂದರೆ ಉಡುಪಿ ,ಕುಂದಾಪುರ ,ಕಾರ್ಕಳದಿಂದ ಬೇರ್ಪಟ್ಟು ಈಗಿನ ಉಡುಪಿ ಜಿಲ್ಲೆಯಾಗಿ ಉದಯವಾಯಿತು. ಉಡುಪಿಯು ಪ್ರಸಿದ್ಧ ಯಾತ್ರಾ ಸ್ಥಳವಾಗಿದೆ ಅದರಲ್ಲೂ ವಿಶೇಷವಾಗಿ ಅಷ್ಢಮಠಗಳ ದರ್ಶನ ಹಾಗೂ ಶ್ರೀ ಕೃಷ್ಣ ದೇಗುಲಗಳ ದರ್ಶನಕ್ಕೆ ಕೇಂದ್ರಸ್ಥಾನವಾಗಿದೆ. ಮಾತ್ರವಲ್ಲದೆ, ಉಡುಪಿ ಹಳೆಯ ಧಾರ್ಮಿಕ ಶೈಕ್ಷಣಿಕ ಕೇಂದ್ರಗಳಲ್ಲಿ ಒಂದಾಗಿದೆ..