ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯು ಸಾರ್ವಜನಿಕ ಆರೋಗ್ಯದ ಪ್ರಾಮುಖ್ಯತೆಯುಳ್ಳ ಅನೇಕ ರಾಷ್ಟ್ರೀಯ ಮತ್ತು ರಾಜ್ಯ ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದು, ರಾಜ್ಯದ ಜನತೆಗೆ ವಿವಿಧ ರೀತಿಯ ಆರೋಗ್ಯ ಮತ್ತು ವೈದ್ಯಕೀಯ ಸಂಸ್ಥೆಗಳ ಮೂಲಕ ಸಮರ್ಪಕ ಆರೋಗ್ಯ ರಕ್ಷಣಾ ಸೇವೆಗಳನ್ನೂ ಸಹ ಕಲ್ಪಿಸುತ್ತದೆ.
ಪ್ರತಿಯೊಂದು ಜಿಲ್ಲಾ ಆಸ್ಪತ್ರೆಯೂ ಈ ಮುಂದಿನ ಸ್ಪೆಷಾಲಿಟಿಗಳನ್ನು ಹೊಂದಿದೆ:
ಔಷಧ, ಪ್ರಸೂತಿಶಾಸ್ತ್ರ ಮತ್ತು ಗರ್ಭಕೋಶಶಾಸ್ತ್ರ, ಮೂಳೆ, ಕಿವಿ, ಮೂಗು ಮತ್ತು ಗಂಟಲು, ವಿಕಿರಣಶಾಸ್ತ್ರ, ದಂತ, ರಕ್ತನಿಧಿ, ಶಸ್ತ್ರಚಿಕಿತ್ಸೆ, ನೇತ್ರಶಾಸ್ತ್ರ, ಮಕ್ಕಳತಜ್ಞತೆ, ಚರ್ಮ ಮತ್ತು ಲೈಂಗಿಕ ರವಾನೆಯ ರೋಗಗಳು, ಅರಿವಳಿಕೆ, ಮನೋವಿಜ್ಞಾನ, ರೋಗಪತ್ತೆಶಾಸ್ತ್ರ.