Close

ಹವಾಮಾನ ಮತ್ತು ಮಳೆ ವಿವರ

ಜಿಲ್ಲೆಯ ಹವಾಮಾನವು ಭಾರತದ ಇತರ ಪಶ್ಚಿಮ ಕರಾವಳಿ ಜಿಲ್ಲೆಗಳ ವ್ಯಾಪಕ ಹವಾಮಾನವನ್ನು ಹಂಚಿಕೊಂಡಿದೆ. ವರ್ಷದ ಹೆಚ್ಚಿನ ಭಾಗದಲ್ಲಿ ಇದು ಅತಿಯಾದ ಆರ್ದ್ರತೆಯನ್ನು (78%) ಹೊಂದಿದೆ

ನಾಲ್ಕು ಋತುಗಳು ಅಂದರೆ.

  1. ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಾಲ್ಕು ಆರ್ದ್ರ ತಿಂಗಳುಗಳು ಜಿಲ್ಲೆಯಲ್ಲಿ ಬಲವಾದ ಗಾಳಿ, ಅಧಿಕ ಆರ್ದ್ರತೆ, ಭಾರಿ ಮಳೆಯನ್ನು ಉಂಟುಮಾಡಿ ತಾಪಮಾನವನ್ನು ಕಮ್ಮಿ ಮಾಡುತ್ತದೆ,
  2. ನೈಋತ್ಯ ಮಾನ್ಸೂನ್ ಮಾರುತಗಳ ಪ್ರಬಲತೆ ಕಮ್ಮಿ ಆದಾಗ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಬೆಚ್ಚಗಿನ ಮತ್ತು ತೇವಭರಿತ ವಾತಾವರಣ ಸೃಷ್ಠಿಯಾಗುತ್ತದೆ.
  3. ಡಿಸೆಂಬರ್, ಜನವರಿ ಮತ್ತು ಫೆಬ್ರುವರಿಯ ಮೂರು ತಿಂಗಳುಗಳು ಸಾಮಾನ್ಯವಾಗಿ ಶುಷ್ಕ ಪರಿಸ್ಥಿತಿ ಇರುವುದರಿಂದ ತಂಪಾದ ವಾತಾವರಣ ಇರುತ್ತದೆ.
  4. ಮಾರ್ಚ್, ಏಪ್ರಿಲ್ ಮತ್ತು ಮೇ ಈ ಮೂರು ತಿಂಗಳುಗಳು ಬಿಸಿಯಾದ ಉಷ್ಣಾಂಶದ ಅವಧಿಯಾಗಿರುತ್ತದೆ . ಜಿಲ್ಲೆಯ ಹವಾಮಾನ ಸಾಮಾನ್ಯವಾಗಿ ಸಮನಾಗಿರುತ್ತದೆ, ಇದು ಕರಾವಳಿಯನ್ನು ಹೊರತುಪಡಿಸಿ ಒಳಭಾಗದಲ್ಲಿ ತಣ್ಣಗಾಗಿರುತ್ತದೆ.