Close

ಎಂಡೋಸಲ್ಫಾನ್

ಎಂಡೋಸಲ್ಫಾನ್‌ ಸಂತ್ರಸ್ಥರ ಆರೋಗ್ಯ ಸುಧಾರಣೆ ಮತ್ತು ಪುನರ್ವಸತಿ ಕಾರ್ಯಕ್ರಮ

  ಎಂಡೋಸಲ್ಫಾನ್ ಪೀಡಿತ 86 ಗ್ರಾಮಗಳಿಗೆ ಸೇರಿದ ವಿಕಲಚೇತನರು ತಮ್ಮ ವ್ಯಾಪ್ತಿಗೆ ಸೇರಿದ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಲಭ್ಯವಿರುವ ನಮೂನೆಗಳಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಅಲ್ಲಿನ ವೈದ್ಯಾಧಿಕಾರಿಗಳ ಸಹಿ ಮತ್ತು ಮೊಹರಿನೊಂದಿಗೆ ನಮೂನೆಗಳನ್ನು ತೆಗೆದುಕೊಂಡು ಜಿಲ್ಲಾ ಆಸ್ಪತ್ರೆ ಉಡುಪಿ ಅಥವಾ ಕುಂದಾಪುರ, ಕಾರ್ಕಳ ತಾಲೂಕು ಸಾರ್ವಜನಿಕ ಆಸ್ಪತ್ರೆಗಳಿಗೆ ಹೋಗಿ ನಿಗದಿತ ದಿನಗಳಂದು ನಡೆಯುವ ತಜ್ಞ ವೈದ್ಯರುಗಳ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ತಪಾಸಣೆಗೊಳಪಟ್ಟು ಸದರಿ ತಜ್ಞ ವೈದ್ಯರುಗಳಿಂದ ಶೇಕಡಾವಾರು ಅಂಗವಿಕಲತೆಯ ಪ್ರಮಾಣದೊಂದಿಗೆ ಎಂಡೋಸಲ್ಫಾನ್ ಪೀಡಿತರು ಎಂದು ನಿಗದಿತ ನಮೂನೆಯಲ್ಲಿ ನಮೂದಿಸಿ ದೃಢೀಕರಿಸಲ್ಪಡಬೇಕು.

  ನಂತರ ಸದರಿ ದೃಢೀಕೃತ ನಮೂನೆಗಳನ್ನು ತಮಗೆ ಸಂಬಂಧಿಸಿದ ಸರಕಾರಿ ಆರೋಗ್ಯ ಸಂಸ್ಥೆಗಳಿಗೆ ಸಲ್ಲಿಸಬೇಕು. ಸದ್ರಿ ಆರೋಗ್ಯ ಸಂಸ್ಥೆಗಳ ಮುಖ್ಯಸ್ಥರು ಹೊಸದಾಗಿ ಎಂಡೋಸಲ್ಫಾನ್ ರೋಗಿಯನ್ನು ಗುರುತಿಸುವ ಸಲುವಾಗಿ ತಮಗೆ ಸಂಬಂಧಿಸಿದ ತಾಲೂಕು ಆರೋಗ್ಯಾಧಿಕಾರಿಗಳಿಗೆ ಪತ್ರ ಬರೆದು ತಜ್ಞ ವೈದ್ಯರು ದೃಢೀಕರಿಸಿದ ನಿಗದಿತ ನಮೂನೆಗಳನ್ನು ಫಲಾನುಭವಿಯ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆಯ ಪಾಸ್ ಬುಕ್ ಪ್ರತಿ, ಪಾಸ್‌ಪೋರ್ಟ್ ಅಳತೆಯ 03 ಭಾವಚಿತ್ರಗಳೊಂದಿಗೆ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿಗೆ ಪ್ರಸ್ತಾವನೆಯನ್ನು ಸಲ್ಲಿಸಬೇಕು. ತಾಲೂಕು ಆರೋಗ್ಯಾಧಿಕಾರಿಗಳು ಸದರಿ ಪ್ರಸ್ತಾವನೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಪತ್ರ ಬರೆದು ಸಲ್ಲಿಸಬೇಕು.

  ಎಂಡೋಸಲ್ಫಾನ್ ಸಾಮಾನ್ಯ ಸಮಿತಿ ಸಭೆಯಲ್ಲಿ ಎಲ್ಲಾ ಹೊಸ ಫಲಾನುಭವಿಗಳ ಪಟ್ಟಿಯನ್ನು ಮಂಡಿಸಿ ಮಾನ್ಯ ಜಿಲ್ಲಾಧಿಕಾರಿಯವರಿಂದ ಮತ್ತು ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಿಂದ ಅನುಮೋದನೆಯನ್ನು ಪಡೆಯಲಾಗುತ್ತದೆ. ನಂತರ ಸಂಬಂಧಿಸಿದ ತಾಲೂಕಿನ ತಹಶಿಲ್ದಾರರವರಿಗೆ ಮಾಸಾಶನ ಪಾವತಿಗಾಗಿ ಫಲಾನುಭವಿಗಳ ಪಟ್ಟಿಯನ್ನು ಅರ್ಜಿ ಮತ್ತು ದಾಖಲಾತಿಗಳ ಸಹಿತ ಕಳುಹಿಸಲಾಗುತ್ತದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಛೇರಿಯಿಂದ ಫಲಾನುಭವಿಗಳಿಗೆ ಎಂಡೋಸಲ್ಫಾನ್ ಗುರುತಿನ ಚೀಟಿಯನ್ನು ಮಾಡಿಕೊಡಲಾಗುವುದು. ನಂತರದಲ್ಲಿ ಬೇಡಿಕೆಯನುಸಾರ ಫಲಾನುಭವಿಗಳಿಗೆ ಸೌಲಭ್ಯಗಳನ್ನು ಒದಗಿಸಲಾಗುವುದು.‌

  ಎಂಡೋಸಲ್ಫಾನ್ ಪೀಡಿತರಿಗೆ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು, ಅಗತ್ಯ ಸೌಲಭ್ಯಗಳನ್ನು ಬಾಧಿತರಿಗೆ ಒದಗಿಸಲು ಮತ್ತು ಅನುಸರಣೆ ಮಾಡಲು ಹಾಗೂ ಹೊಸದಾಗಿ ಎಂಡೋಸಲ್ಫಾನ್‌ ಬಾಧಿತರನ್ನು ಗುರುತಿಸಲು ಎಂಡೋಸಲ್ಫಾನ್‌ ಬಾಧಿತ ಪ್ರದೇಶಗಳ ವ್ಯಾಪ್ತಿಯ ಗ್ರಾಮಪಂಚಾಯತ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಸಂಬಂಧಪಟ್ಟ ಆರೋಗ್ಯ ಸಂಸ್ಥೆಗಳ ವೈದ್ಯಾಧಿಕಾರಿಯವರು ಮತ್ತು ಸಿಬ್ಬಂದಿಯವರೊಂದಿಗೆ ಸಮನ್ವಯ ಸಾಧಿಸಿ ಸೇವೆ ನೀಡುತ್ತಾರೆ. ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಎಂಡೋಸಲ್ಫಾನ್‌ ಪ್ರದೇಶಗಳ ವ್ಯಾಪ್ತಿಯ ಆರೋಗ್ಯ ಸಂಸ್ಥೆಗಳ ವೈದ್ಯಾಧಿಕಾರಿಗಳು ಮತ್ತು ಗ್ರಾಮೀಣ ಪುನರ್ವಸತಿ ಕಾ‍ರ್ಯಕರ್ತರನ್ನು ಸಂಪರ್ಕಿಸಬಹುದು.

  ಎಂಡೋಸಲ್ಫಾನ್‌ ಬಾಧಿತ ಪ್ರದೇಶಗಳ ವ್ಯಾಪ್ತಿಯಲ್ಲಿರುವ ಆರೋಗ್ಯ ಸಂಸ್ಥೆಗಳ ಉಪಕೇಂದ್ರಗಳಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದು, ಅವರು ಎಂಡೋಸಲ್ಫಾನ್‌ ಬಾಧಿತರಿಗೆ ಆರೋಗ್ಯ ತಪಾಸಣೆ, ಚಿಕಿತ್ಸೆ, ಆರೈಕೆ ಹಾಗೂ ಎಂಡೋಸಲ್ಫಾನ್‌ ಬಾಧಿತರಿಗೆ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಎಂಡೋಸಲ್ಫಾನ್‌ ಬಾಧಿತರು ಹೆಚ್ಚಿನ ಮಾಹಿತಿಗಾಗಿ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಬಹುದು.

  ಶಿಕ್ಷಣ ಇಲಾಖೆಯ ವತಿಯಿಂದ ಸಮಗ್ರ ಶಿಕ್ಷಣ ಕಾರ್ಯಕ್ರಮದಡಿಯಲ್ಲಿ ವಿಕಲಚೇತನ ಮಕ್ಕಳಿಗೆ ನಡೆಸಲಾಗುತ್ತಿರುವ 05 ಬಿ.ಆರ್.ಸಿ. (Block Resource Centre) ಕೇಂದ್ರಗಳಲ್ಲಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ DDRC ಕೇಂದ್ರದಿಂದ ನಿಯೋಜಿಸಲ್ಪಟ್ಟ ಸಿಬ್ಬಂದಿಯವರು ನಿಗದಿತ ದಿನಗಳಲ್ಲಿ ಎಂಡೋಸಲ್ಫಾನ್‌ ಬಾಧಿತರಿಗೆ ಅಗತ್ಯ ಸೇವೆ ಹಾಗೂ ಆರೈಕೆ ನೀಡಲಿದ್ದಾರೆ. BRC ಕೇಂದ್ರಗಳ ವಿವರ, ನಿಯೋಜಿತ ಸಿಬ್ಬಂದಿಯವರ ಮಾಹಿತಿ ಮತ್ತು ವೇಳಾಪಟ್ಟಿ ಯನ್ನು ಈ ವೆಬ್‌ಸೈಟ್‌ನಲ್ಲಿ ನೀಡಲಾಗಿದ್ದು, ಎಂಡೋಸಲ್ಫಾನ್‌ ಬಾಧಿತರು ಸಂಪರ್ಕಿಸಬಹುದು.

ಎಂಡೋಸಲ್ಫಾನ್‌ ಬಾಧಿತರು ಎದುರಿಸುವ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಸಂಪರ್ಕಿಸಬೇಕಾದ ಅಧಿಕಾರಿಗಳ ಮಾಹಿತಿ ವೆಬ್‌ಸೈಟ್‌ನಲ್ಲಿ ನೀಡಲಾಗಿದೆ.

  ಎಂಡೋಸಲ್ಫಾನ್‌ ಬಾಧಿತರು ಹೆಚ್ಚಿನ ಚಿಕಿತ್ಸೆಗಾಗಿ ಕೆ.ಎಂ.ಸಿ. ಮಣಿಪಾಲ ಇಲ್ಲಿಗೆ ಹೋಗುವಾಗ ಮೊದಲಿಗೆ ಅಲ್ಲಿನ ಕಾರ್ಪೋರೇಟ್‌ ಹೆಲ್ಪ್‌ಡೆಸ್ಕ್‌ ನ್ನು ಸಂಪರ್ಕಿಸಿ, ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಮತ್ತು ಅಲ್ಲಿನ ಸಿಬ್ಬಂದಿಯ ನಿರ್ದೇಶನವನ್ನು ಪಾಲಿಸುವುದು.

Janaspandana
playstore