ಜಿಲ್ಲೆಯ ಹವಾಮಾನವು ಭಾರತದ ಇತರ ಪಶ್ಚಿಮ ಕರಾವಳಿ ಜಿಲ್ಲೆಗಳ ವ್ಯಾಪಕ ಹವಾಮಾನವನ್ನು ಹಂಚಿಕೊಂಡಿದೆ. ವರ್ಷದ ಹೆಚ್ಚಿನ ಭಾಗದಲ್ಲಿ ಇದು ಅತಿಯಾದ ಆರ್ದ್ರತೆಯನ್ನು (78%) ಹೊಂದಿದೆ
ನಾಲ್ಕು ಋತುಗಳು ಅಂದರೆ.
- ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ನಾಲ್ಕು ಆರ್ದ್ರ ತಿಂಗಳುಗಳು ಜಿಲ್ಲೆಯಲ್ಲಿ ಬಲವಾದ ಗಾಳಿ, ಅಧಿಕ ಆರ್ದ್ರತೆ, ಭಾರಿ ಮಳೆಯನ್ನು ಉಂಟುಮಾಡಿ ತಾಪಮಾನವನ್ನು ಕಮ್ಮಿ ಮಾಡುತ್ತದೆ,
- ನೈಋತ್ಯ ಮಾನ್ಸೂನ್ ಮಾರುತಗಳ ಪ್ರಬಲತೆ ಕಮ್ಮಿ ಆದಾಗ ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಬೆಚ್ಚಗಿನ ಮತ್ತು ತೇವಭರಿತ ವಾತಾವರಣ ಸೃಷ್ಠಿಯಾಗುತ್ತದೆ.
- ಡಿಸೆಂಬರ್, ಜನವರಿ ಮತ್ತು ಫೆಬ್ರುವರಿಯ ಮೂರು ತಿಂಗಳುಗಳು ಸಾಮಾನ್ಯವಾಗಿ ಶುಷ್ಕ ಪರಿಸ್ಥಿತಿ ಇರುವುದರಿಂದ ತಂಪಾದ ವಾತಾವರಣ ಇರುತ್ತದೆ.
- ಮಾರ್ಚ್, ಏಪ್ರಿಲ್ ಮತ್ತು ಮೇ ಈ ಮೂರು ತಿಂಗಳುಗಳು ಬಿಸಿಯಾದ ಉಷ್ಣಾಂಶದ ಅವಧಿಯಾಗಿರುತ್ತದೆ . ಜಿಲ್ಲೆಯ ಹವಾಮಾನ ಸಾಮಾನ್ಯವಾಗಿ ಸಮನಾಗಿರುತ್ತದೆ, ಇದು ಕರಾವಳಿಯನ್ನು ಹೊರತುಪಡಿಸಿ ಒಳಭಾಗದಲ್ಲಿ ತಣ್ಣಗಾಗಿರುತ್ತದೆ.