ಜಿಲ್ಲಾಡಳಿತ
ಕಂದಾಯ ಇಲಾಖೆಯ ಅಧೀನ ಕಛೇರಿಯಾದ ಜಿಲ್ಲಾಧಿಕಾರಿಯವರ ಕಛೇರಿಯು ಜಿಲ್ಲೆಯ ಸಮಸ್ತ ಆಡಳಿತ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದು, ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ನಿರ್ವಹಿಸುತ್ತದೆ. ಜಿಲ್ಲಾಧಿಕಾರಿಗಳು ಜಿಲ್ಲಾ ಆಡಳಿತದ ಮುಖ್ಯಸ್ಥರಾಗಿರುತ್ತಾರೆ. ಜಿಲ್ಲಾಧಿಕಾರಿಗಳ ಕಛೆರಿಯಲ್ಲಿ ವಿವಿಧ ಶಾಖೆಗಳಿದ್ದು, ಇದಕ್ಕೆ ಶಿರಸ್ತೆದಾರ್ ಅಥವಾ ಮ್ಯಾನೇಜರ್ ಮುಖ್ಯಸ್ಥರಾಗಿರುತ್ತಾರೆ. ಇವರುಗಳು ತಮ್ಮ ಶಾಖೆಯ ಕೆಲಸದ ನಿರ್ವಹಣೆ, ಮತ್ತು ಮೇಲ್ವಿಚಾರಣೆ ಮಾಡಬೇಕಿರುತ್ತದೆ ಹಾಗೂ ಸಂಪೂರ್ಣ ಶಾಖೆಯ ಜವಾಬ್ದಾರಿ ಇವರದಾಗಿರುತ್ತದೆ. ಪ್ರತಿಯೊಂದು ಶಾಖೆಯಲ್ಲಿ ಒಬ್ಬ ಪ್ರಥಮ ದರ್ಜೆ ಸಹಾಯಕ ಮತ್ತು ದ್ವೀತೀಯ ದರ್ಜೆ ಸಹಾಯಕರಿರುತ್ತಾರೆ ಹಾಗೂ ಇವರುಗಳಿಗೆ ಶಾಖೆಯ ಕೆಲಸದ ಜವಾಬ್ದಾರಿಯನ್ನು ಹಂಚಲಾಗಿರುತ್ತದೆ. .ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ವಿವಿಧ ಅಧಿಕಾರಿಗಳಿದ್ದು ಇವರುಗಳು ಜಿಲ್ಲಾಧಿಕಾರಿಗಳಿಗೆ ಕೆಲಸದ ಜವಾಬ್ದಾರಿ ನಿರ್ವಾಹಿಸಲು ಸಹಾಯಕರಾಗಿರುತ್ತಾರೆ. ಉಪವಿಭಾಗಾಮಟ್ಟದಲ್ಲಿ ಉಪವಿಭಾಗಾಧಿಕಾರಿಗಳು, ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್, ಶಿರಸ್ತೇದಾರ್, ಕಂದಾಯ ಪರಿವೀಕ್ಷಕರು ಮತ್ತು ಗ್ರಾಮ ಲೆಕ್ಕಧಿಕಾರಿಗಳು. ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಕಂದಾಯ ಮೇಲ್ಮನವಿ, ಭೂ ಕಂದಾಯ ಕಾಯ್ದೆ 1964, ಪಿಟಿಸಿಎಲ್ ಕಾಯ್ದೆ 1978 ಹಾಗೂ ಇನಾಂ ರದ್ದಾಯತಿ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಯುತ್ತದೆ.