ತೋಟಗಾರಿಕೆ ಇಲಾಖೆ
(ಜಿಲ್ಲಾ ಪಂಚಾಯತ್), ಉಡುಪಿ ಜಿಲ್ಲೆ
2020-21 ನೇ ಸಾಲಿನ ವಾರ್ಷಿಕ ಆಡಳಿತ ವರದಿ
ತೋಟಗಾರಿಕೆ ರಂಗದಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಪ್ರಮುಖ ಸ್ಥಾನ ಹೊಂದಿದೆ. ತೋಟಗಾರಿಕೆಯು ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಜನರ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಪೌಷ್ಟಿಕ ಆಹಾರ, ಆರ್ಥಿಕ ಆದಾಯ, ನಿರಂತರ ಉದ್ಯೋಗ, ವಿವಿಧ ರೀತಿಯ ಸಂಸ್ಕರಣೆ ಮತ್ತು ಇತರೆ ಉದ್ದಿಮೆಗಳಿಗೆ ಕಚ್ಚಾ ಸಾಮಗ್ರಿಗಳ ಪೊರೈಕೆ, ರಪ್ತು ಗುಣಮಟ್ಟದ ಉತ್ಪನ್ನಗಳ ಉತ್ಪಾದನೆ ಅಲ್ಲದೆ ಉತ್ತಮ ಪರಿಸರವನ್ನು ಒದಗಿಸುತ್ತದೆ. ತೋಟಗಾರಿಕೆ ಉತ್ಪನ್ನಗಳು ವಿಪುಲ ರಪ್ತು ಅವಕಾಶವನ್ನು ಹೊಂದಿದ್ದು, ಅಧಿಕ ಮೌಲ್ಯವುಳ್ಳ ಉತ್ಪನ್ನಗಳಾಗಿವೆ. ಉಡುಪಿ ಜಿಲ್ಲೆಯ ಹವಾಗುಣ ಮತ್ತು ಮಣ್ಣು ವಿವಿಧ ಜಾತಿಯ ತೋಟಗಾರಿಕೆ ಬೆಳೆಗಳನ್ನು ಬೆಳೆಸಲು ಅತ್ಯುತ್ತಮವಾಗಿದೆ. ತೋಟಗಾರಿಕೆ ಬೆಳೆಗಳು ಜಿಲ್ಲೆಯ ಮುಖ್ಯ ಆರ್ಥಿಕ ಮೂಲವಾಗಿದೆ. ಬಹಳ ಹಿಂದಿನಿಂದಲೂ ಜಿಲ್ಲೆಯಲ್ಲಿ ತೋಟದ ಬೆಳೆಗಳಾದ ತೆಂಗು, ಅಡಿಕೆ, ಗೇರು, ಸಾಂಬಾರು ಬೆಳೆಗಳಾದ ಕರಿಮೆಣಸು, ಜಾಯಿಕಾಯಿ, ಹಣ್ಣಿನ ಬೆಳೆಗಳಾದ ಮಾವು, ಚಿಕ್ಕು, ಬಾಳೆ, ಅನಾನಸ್ಸ್ ಹಾಗೂ ತರಕಾರಿ ಬೆಳೆಗಳಾದ ಮಟ್ಟುಗುಳ್ಳ, ಹಸಿಮೆಣಸು, ಸೌತೆ, ಬೆಂಡೆ ಇತ್ಯಾದಿ ಬೆಳೆಗಳನ್ನು ಬೆಳೆಸಲಾಗುತ್ತಿದೆ. ಉಡುಪಿ ಜಿಲ್ಲೆಯ ಉಡುಪಿ ಮಲ್ಲಿಗೆ ಹಾಗೂ ಮಟ್ಟುಗುಳ್ಳ ಬದನೆ ಬೆಳೆಗೆ ಬೌಗೋಳಿಕ ಗುರುತಿಸುವಿಕೆ ಸ್ಥಾನಮಾನ ದೊರೆತಿರುತ್ತದೆ.
ಉಡುಪಿ ಜಿಲ್ಲೆಯ ಒಟ್ಟು ಭೌಗೋಳಿಕ ವಿಸ್ತೀರ್ಣ 3,56,446 ಹೆಕ್ಟೇರ್ ಇದ್ದು, ನಿವ್ವಳ ಸಾಗುವಳಿ ವಿಸ್ತೀರ್ಣ 1,00,302 ಹೆಕ್ಟೇರ್ ಗಳಲ್ಲಿ 74,838 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಸಲಾಗುತ್ತಿದೆ. ಜಿಲ್ಲೆಯಲ್ಲಿ ಗೇರು ಹಾಗೂ ತೆಂಗಿನ ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸುತ್ತಿರುತ್ತದೆ. ರೈತರಿಗೆ ಉತ್ತಮ ಗುಣಮಟ್ಟದ ಸಸ್ಯ ಸಾಮಗ್ರಿಗಳನ್ನು ಒದಗಿಸಲು ಸರ್ಕಾರಿ ಸಾಮ್ಯದ ಹಾಗೂ ಖಾಸಗಿ ನರ್ಸರಿಗಳು ಕಾರ್ಯನಿರ್ವಹಿಸುತ್ತಿದೆ. ಕಾರ್ಕಳ ತಾಲೂಕಿನಲ್ಲಿ ಇಲಾಖೆಯಿಂದ ನಿರ್ಮಿಸಿರುವ ತೋಟಗಾರಿಕೆ ರೈತ ಉತ್ಪಾದಕರ ಕಂಪನಿ ಕಾರ್ಯನಿರ್ವಹಿಸುತ್ತಿದೆ
ಇಲಾಖೆಯಲ್ಲಿ ರೈತರಿಗೆ ಉತ್ತಮ ಗುಣಮಟ್ಟದ ವಿವಿಧ ತೋಟಗಾರಿಕೆ ಬೆಳೆಗಳ ಗಿಡಗಳನ್ನು ಅಭಿವೃದ್ಧಿ ಪಡಿಸಿಕೊಡಲು ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳನ್ನು ತಾಲೂಕು ಮಟ್ಟಗಳಲ್ಲಿ ಸ್ಥಾಪಿಸಿದೆ. ಜಿಲ್ಲೆಯಲ್ಲಿ 2 ತೋಟಗಾರಿಕೆ ನರ್ಸರಿಗಳು ಹಾಗೂ 6 ತೋಟಗಾರಿಕೆ ಕ್ಷೇತ್ರಗಳು ಇರುತ್ತದೆ.
ಜಿಲ್ಲೆಯ ಬ್ರಹ್ಮಾವರದಲ್ಲಿರುವ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರವು ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದಂತೆ ಅಗತ್ಯ ಸಂಶೋಧನೆ ಕಾರ್ಯಕ್ರಮ ರೂಪಿಸುತ್ತಿದೆ. ಇಲಾಖೆಯಿಂದ ಜಿಲ್ಲೆಯಲ್ಲಿ ಸಾಂಪ್ರಾದಾಯಿಕ ತೋಟಗಾರಿಕೆ ಬೆಳೆಗಳ ಕೃಷಿಯನ್ನು ಅಭಿವೃದ್ಧಿ ಪಡಿಸಲು ಹಾಗೂ ಜಿಲ್ಲೆಯಲ್ಲಿ ಬೆಳೆಯ ಬಹುದಾದ ಹೊಸ ತೋಟಗಾರಿಕೆ ಬೆಳೆಗಳನ್ನು ಪರಿಚಯಿಸಲು ವಿವಿಧ ಯೋಜನೆಗಳಲ್ಲಿ ಕಾರ್ಯಕ್ರಮಗಳನ್ನು 2020-21 ನೇ ಸಾಲಿಗೆ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲೆಯಲ್ಲಿ ಇಲಾಖೆಯ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಜಿಲ್ಲಾ ಮಟ್ಟದಲ್ಲಿ ತೋಟಗಾರಿಕೆ ಉಪನಿರ್ದೇಶಕರಿದ್ದು, ತಾಲೂಕು ಮಟ್ಟದಲ್ಲಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ಅವರ ಸಿಬ್ಬಂದಿ ವರ್ಗ ಹಾಗೂ ಹೋಬಳಿ ಮಟ್ಟದಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಾರೆ.
2019-20 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಲಾದ ವಿವಿದ ಯೋಜನೆಗಳ ಸಂಕ್ಷಿಪ್ತ ವಿವರ ಈ ಕೆಳಗಿನಂತಿದೆ
- 2020-21 ನೇ ಸಾಲಿಗೆ ತೋಟಗಾರಿಕೆ ಇಲಾಖೆಗೆ ವಿವಿದ ಯೋಜನಾ ಕಾರ್ಯಕ್ರಮಗಳಿಗೆ ಒಟ್ಟು ರೂ. 764.03 ಲಕ್ಷ ನಿಗದಿಯಾಗಿದ್ದು, 2021 ನೇ ಮಾರ್ಚ್ ಮಾಹೆಯ ಅಂತ್ಯಕ್ಕೆ ರೂ. 712.95 ಲಕ್ಷ ಬಿಡುಗಡೆಯಾಗಿದ್ದು ರೂ. 697.23 ಲಕ್ಷ ವೆಚ್ಚ ಭರಿಸಲಾಗಿರುತ್ತದೆ.
- ಜಿಲ್ಲಾವಲಯ ಹಾಗೂ ತಾಲೂಕು ಪಂಚಾಯತ್ ಯೋಜನೆಗಳಡಿ ರೂ. 42.24 ಲಕ್ಷ ವೆಚ್ಚ ಭರಿಸಲಾಗಿದ್ದು, ಹನಿ/ತುಂತುರು ನೀರಾವರಿಗೆ ಸಹಾಯಧನ, ತೋಟಗಾರಿಕೆ ಕಟ್ಟಡಗಳು, ತೋಟಗಾರಿಕೆ ಕ್ಷೇತ್ರಗಳ ನಿರ್ವಹಣೆ, ಪ್ರಚಾರ ಸಾಮಗ್ರಿಗಳ ಮುದ್ರಣ, ಜೇನು ಕೃಷಿ ಬಗ್ಗೆ ತರಭೇತಿಗಳ ಆಯೋಜನೆ, ಜೇನು ಪೆಟ್ಟಿಗೆ/ಕುಟುಂಬಗಳಿಗೆ ಸಹಾಯಧನ,ಹಾಗೂ ತರಭೇತಿಗಳನ್ನು ಆಯೋಜಿಸಲಾಗಿರುತ್ತದೆ
- ರಾಜ್ಯ ವಲಯ ಯೋಜನೆಗಳಡಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪರಿಹಾರಧನ ವಿತರಣೆ ಕಾರ್ಯಕ್ರಮ, ಅನುಸೂಚಿತ ಜಾತಿ ಮತ್ತು ಪಂಗಡಗಳ ಅಧಿನಿಯಮದಡಿ ಉಳಿಕೆಯಾದ ಮೊತ್ತ, ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆ, ಮಧುವನ ಮತ್ತು ಜೇನು ಸಾಕಾಣೆ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗಿದ್ದು ರೂ. 167.34 ಲಕ್ಷ ವೆಚ್ಚ ಭರಿಸಲಾಗಿರುತ್ತದೆ.
- ವಿವಿಧ ಕೇಂದ್ರ ವಲಯ ಯೋಜನೆಗಳಾದ ಪರಂಪರಾಗತ ಕೃಷಿ ವಿಕಾಸ ಯೋಜನೆ, ಸಾಮರ್ಥ್ಯವುಳ್ಳ ರಾಜ್ಯಗಳಲ್ಲಿ ಎಣ್ಣೆ ತಾಳೆ ವ್ಯವಸಾಯ ಯೋಜನೆ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಉತ್ಪಾದನಾ ಸುಧಾರಣಾ ಕಾರ್ಯಯೋಜನೆಗಾಗಿ ತೆಂಗಿನಲ್ಲಿ ಸಂಯೋಜಿತ ಬೇಸಾಯ, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ಕೃಷಿ ಯಾಂತ್ರೀಕರಣ ಉಪ ಮಿಷನ್ ಯೋಜನೆಗಳನ್ನು ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಲಾಗಿದ್ದು ಒಟ್ಟು ರೂ. 487.95 ಲಕ್ಷ ವೆಚ್ಚ ಭರಿಸಲಾಗಿರುತ್ತದೆ.
- 2020-21 ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 43 ಹೆಕ್ಟೇರ್ ವಿಸ್ತೀರ್ಣದಲ್ಲಿ ಪ್ರದೇಶ ವಿಸ್ತರಣೆ ಕೈಗೊಳ್ಳಲಾಗಿದ್ದು ಜಿಲ್ಲೆಯ ಸಾಂಪ್ರಾದಾಯಕ ಬೆಳೆಗಳಾದ ಗೇರು ಬಾಳೆ, ಕಾಳುಮೆಣಸು, ಅನಾನಸ್ಸು, ತರಕಾರಿ, ಅಡಿಕೆ, ಕೋಕ್ಕೊ, ಹಾಗೂ ಕಾಳುಮೆಣಸು ಪ್ರದೇಶ ವಿಸ್ತರಣೆ ಕೈಗೋಳ್ಳಲಾಗಿದೆ.
- 2020-21 ನೇ ಸಾಲಿನಲ್ಲಿ ಒಟ್ಟು 54 ಹೆಕ್ಟೇರ್ ತೆಂಗು ತೋಟಗಳ ಪುನಃಶ್ಚೇತನ ಹಾಗೂ 40.00 ಹೆಕ್ಟೇರ್ ಕಾಳುಮೇಣಸು ತೋಟಗಳ ಪುನಃಶ್ಚೇತನಕ್ಕೆ ಸಹಾಯಧನ ವಿತರಿಸಲಾಗಿರುತ್ತದೆ
- ಕೋವಿಡ್-19 ರ ನಿಯಂತ್ರಣಕ್ಕಾಗಿ ವಿಧಿಸಲಾದ ಲಾಕ್ ಡೌನ್ ಅವಧಿಯಲ್ಲಿ ಸಂಕಷ್ಟಕ್ಕೊಳಗಾದ 1,646 ಹಣ್ಣಿನ ಬೆಳೆಗಾರರಿಗೆ, 716 ಹೂವಿನ ಬೆಳೆಗಾರರಿಗೆ ಹಾಗೂ 37 ತರಕಾರಿ ಬೆಳೆಗಾರರಿಗೆ ಒಟ್ಟು ರೂ. 75.35 ಲಕ್ಷ ಪರಿಹಾರವನ್ನು 2020-21 ನೇ ಸಾಲಿನಲ್ಲಿ ವಿತರಿಸಲಾಗಿರುತ್ತದೆ
- ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ ಬೈಂದೂರು ತಾಲೂಕಿನ00 ಹೆಕ್ಟೇರ್ ಗುಚ್ಚದಲ್ಲಿ ಸಾವಯವ ತೋಟಗಾರಿಕೆಯನ್ನು ಅಳವಡಿಸಿ ಪ್ರಥಮ ವರ್ಷದ ಸಾವಯವ ಪರಿವರ್ತನೆಗೆ ಕ್ರಮವಹಿಸಲಾಗಿರುತ್ತದೆ
- ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ 1 ಸಣ್ಣ ಸಸ್ಯಾಗಾರ, 3 ಅಣಬೆ ಉತ್ಪಾದನಾ ಘಟಕ, 4 ಸಣ್ಣ ಟ್ರ್ಯಾಕ್ಟರ್, 8 ಪ್ಯಾಕ್ ಹೌಸ್ ಹಾಗೂ 4 ಬಹುಪಯೋಗಿ ಸಂಸ್ಕರಣಾ ಘಟಕಗಳಿಗೆ ಸಹಾಯಧನ ವಿತರಿಸಲಾಗಿದ್ದು ತೋಟಗಾರಿಕೆ ಚಟುವಟಿಕೆಗಳಲ್ಲಿ ಉದ್ಯೋಗವಕಾಶ ಕಲ್ಪಿಸಲು ಅನುಕೂಲವಾಗಿದೆ
- ಜಿಲ್ಲೆಯ ಪ್ರಮುಖ ತೋಟಗಾರಿಕೆ ಬೆಳೆಯಾದ ಅಡಿಕೆ ಹಾಗೂ ಇತರೆ ತೋಟಗಾರಿಕೆ ಉತ್ಪನ್ನಗಳನ್ನು ಒಣಗಿಸಲು ರೈತರು ನಿರ್ಮಾಣ ಮಾಡುವ Poly Tunnel Dryer ಗಳಲ್ಲಿ ಉಪಯೋಗಿಸುವ Silpaulin Sheet ಗಳನ್ನು ಖರೀದಿಸಿದ ಜಿಲ್ಲೆಯ ಒಟ್ಟು 375 ಜನ ರೈತರಿಗೆ ರೂ. 10.43 ಲಕ್ಷ ಸಹಾಯಧನ ವಿತರಿಸಲಾಗಿದೆ
- ಜಿಲ್ಲೆಯಲ್ಲಿ ನೀರಿನ ಸಂರಕ್ಷಣೆಗಾಗಿ ಕೃಷಿ ಹೊಂಡಗಳನ್ನು ನಿರ್ಮಾಣ ಮಾಡಿದ ಒಟ್ಟು 13 ಜನ ರೈತರಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಗಳಡಿ ಸಹಾಯಧನ ವಿತರಿಸಲಾಗಿರುತ್ತದೆ
- ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ 47 ಹೆಕ್ಟೇರ್ ವಿಸ್ತೀರ್ಣದಲ್ಲಿರುವ ತೋಟಗಾರಿಕೆ ಬೆಳೆಗಳನ್ನು ಸೂಕ್ಮ ನೀರಾವರಿ ವ್ಯಾಪ್ತಿಗೆ ಒಳಪಡಿಸಲಾಗಿರುತ್ತದೆ
- ಕೃಷಿ ಯಾಂತ್ರೀಕರಣ ಉಪಮಿಷನ್ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಬೆಳೆಗಳಲ್ಲಿ ಉಪಯೋಗಿಸುವ ವಿವಿದ ಯಂತ್ರೋಪಕರಣಗಳನ್ನು ಖರೀದಿಸಿದ ಒಟ್ಟು 208 ಜನ ರೈತರಿಗೆ ರೂ. 18.67 ಲಕ್ಷ ಸಹಾಯಧನ ವಿತರಿಸಲಾಗಿರುತ್ತದೆ
- ಬೆಳೆ ಇಳುವರಿ ಹೆಚ್ಚಳಕ್ಕಾಗಿ ಜೇನು ಸಾಕಾಣೆಗೆ ಪ್ರೋತ್ಸಾಹ ನೀಡಲು ಜಿಲ್ಲೆಯಲ್ಲಿ 2020-21 ನೇ ಸಾಲಿನಲ್ಲಿ ಒಟ್ಟು 6 ತರಭೇತಿಗಳನ್ನು ಆಯೋಜಿಸಿ, ತರಬೇತಿ ಪಡೆದ ಫಲಾನುಭವಿಗಳು ಖರೀದಿಸಿದ 428 ಜೇನು ಪೆಟ್ಟಿಗೆ/ಕುಟುಂಬಕ್ಕೆ ಹಾಗೂ 6 ಜೇನು ಸಂಗ್ರಹಣಾ ಯಂತ್ರಗಳಿಗೆ ಇಲಾಖೆಯ ವಿವಿದ ಯೋಜನೆಗಳಡಿ ಸಹಾಯಧನ ವಿತರಿಸಲಾಗಿರುತ್ತದೆ.
- ವಿವಿದ ಯೋಜನೆಗಳಡಿ ಲಭ್ಯ ಅನುದಾನದಡಿ ಜಿಲ್ಲೆಯ ರೈತರಿಗೆ ತರಭೇತಿ, ಪ್ರವಾಸ ಹಾಗೂ ಕ್ಷೇತ್ರ ಬೇಟಿಗಳನ್ನು ರೈತರ ಬೇಡಿಕೆಯ ಆದಾರದಲ್ಲಿ ಆಯೋಜಿಸಲಾಗಿರುತ್ತದೆ
- ಜಿಲ್ಲೆಯ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಉತ್ಪಾದಿಸಲಾದ ವಿವಿದ ಕಸಿ/ಸಸಿ ಗಿಡಗಳನ್ನು ಇಲಾಖಾ ದರದಲ್ಲಿ ರೈತರಿಗೆ ಮಾರಾಟ ಮಾಡಲಾಗಿರುತ್ತದೆ ಹಾಗೂ ಇದರಿಂದ ಬಂದ ಆದಾಯವನ್ನು ಸರ್ಕಾರಕ್ಕೆ ಜಮಾ ಮಾಡಲಾಗಿರುತ್ತದೆ.
- ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀನ ಉದ್ಯೋಗ ಖಾತರಿ ಯೋಜನೆಯಡಿ ತೋಟಗಾರಿಕೆ ಚಟುವಟಿಕೆಗೆ ರೂ. 175.37 ಲಕ್ಷ ವೆಚ್ಚ ಬರಿಸಿ 60,403 ಮಾನವ ದಿನಗಳನ್ನು ಸೃಜಿಸಲಾಗಿರುತ್ತದೆ
- ಮರುವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯಡಿ ಉಡುಪಿ ಜಿಲ್ಲೆಯ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳಿಗೆ ರೈತರು ವಿಮೆ ಮಾಡಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. 2019-20 ನೇ ಸಾಲಿಗೆ ಸದರಿ ಬೆಳೆಗಳಡಿ 3473 ರೈತರು ವಿಮೆ ಮಾಡಿಸಿದ್ದು, 4,704 ಪ್ರಕರಣಗಳಲ್ಲಿ ರೂ. 98.22554 ಲಕ್ಷ ವಿಮಾ ಕಂತನ್ನು ರೈತರು ಪಾವತಿಸಿದ್ದು, 3,352 ಪ್ರಕರಣಗಳಲ್ಲಿ, 2388 ರೈತರಿಗೆ ರೂ. 617.99 ಲಕ್ಷ ವಿಮಾ ಮೊತ್ತ ಪಾವತಿಯಾಗಿರುತ್ತದೆ. 2020-21 ನೇ ಸಾಲಿನಲ್ಲಿ ಒಟ್ಟು 3085 ರೈತರು ವಿಮೆ ಮಾಡಿಸಿದ್ದು, ರೂ. 102.23416 ಲಕ್ಷ ವಿಮಾ ಕಂತನ್ನು ರೈತರು ಪಾವತಿಸಿದ್ದು, ವಿಮಾ ಅವಧಿ ಜೂನ್ 30, 2021 ರವರೆಗೆ ಇರುವುದರಿಂದ ಅವಧಿ ಮುಗಿದ ನಂತರದಲ್ಲಿ ವಿಮಾ ಮೊತ್ತವು ಅರ್ಹ ರೈತರಿಗೆ ಪಾವತಿಯಾಗಲಿದೆ.
- 2020-21 ನೇ ಸಾಲಿನಲ್ಲಿ ಪ್ರಾಕೃತಿಕ ವಿಕೋಪದಡಿ ಹಾನಿಯಾದ ಒಟ್ಟು 59 ಹೆಕ್ಟೇರ್ ತೋಟಗಾರಿಕೆ ಬೆಳೆಗೆ ರೂ. 5.50374 ಲಕ್ಷ ಪರಿಹಾರವನ್ನು 218 ರೈತರಿಗೆ ಕಂದಾಯ ಇಲಾಖೆಯ ಮೂಲಕ ವಿತರಿಸಲಾಗಿರುತ್ತದೆ
ತೋಟಗಾರಿಕೆ ಉಪನಿರ್ದೇಶಕರು
ಜಿಲ್ಲಾ ಪಂಚಾಯತ್, ಉಡುಪಿ
2020-21 ನೇ ಸಾಲಿಗೆ ಜಿಲ್ಲಾ ಪಂಚಾಯತ್ ಯೋಜನೆಗಳ ಆರ್ಥಿಕ ಪ್ರಗತಿಯ ವಿವರ (31-03-2021 ರ ಅಂತ್ಯಕ್ಕೆ) ರೂ.ಲಕ್ಷಗಳಲ್ಲಿ
ಕ್ರ.ಸಂ |
ಯೊಜನೆಗಳ ವಿವರ |
ವಾರ್ಷಿಕ ಆರ್ಥಿಕ ಗುರಿ |
ಬಿಡುಗಡೆಯಾದ ಅನುದಾನ |
ಖರ್ಚು |
1 |
ಕಾರ್ಯಕಾರಿ ಸಿಬ್ಬಂದಿ |
190.10 |
173.67 |
173.63 |
2 |
ತೋಟಗಾರಿಕೆ ಬೆಳೆಗಳಿಗೆ ವಿಶೇಷ ಹನಿ ನೀರಾವರಿ ಸಹಾಯಧನ |
2.00 |
2.00 |
2.00 |
3 |
ತೋಟಗಾರಿಕೆ ಕಟ್ಟಡಗಳು |
11.42 |
11.42 |
11.14 |
4 |
ತೋಟಗಾರಿಕೆ ಕ್ಷೇತ್ರಗಳ ನಿರ್ವಹಣೆ |
10.00 |
10.00 |
9.99 |
5 |
ತೆಂಗು ಬೀಜ ಸಂಗ್ರಹಣೆ ಮತ್ತು ನರ್ಸರಿ ನಿರ್ವಹಣೆ ಯೋಜನೆ |
3.00 |
3.00 |
3.00 |
6 |
ಪ್ರಚಾರ ಮತ್ತು ಸಾಹಿತ್ಯ |
7.00 |
7.00 |
7.00 |
7 |
ಜೇನು ಸಾಕಣೆ |
7.82 |
7.82 |
7.81 |
ಒಟ್ಟು |
231.31 |
214.91 |
214.57 |
2020-21 ನೇ ಸಾಲಿಗೆ ತಾಲೂಕು ಪಂಚಾಯತ್ ಯೋಜನೆಗಳಲ್ಲಿ ಆರ್ಥಿಕ ಪ್ರಗತಿಯ ವಿವರ (31-03-2021 ರ ಅಂತ್ಯಕ್ಕೆ) ರೂ.ಲಕ್ಷಗಳಲ್ಲಿ
ಕ್ರ.ಸಂ |
ಯೊಜನೆಗಳ ವಿವರ |
ವಾರ್ಷಿಕ ಆರ್ಥಿಕ ಗುರಿ |
ಬಿಡುಗಡೆಯಾದ ಅನುದಾನ |
ಖರ್ಚು |
2 |
ರೈತರಿಗಾಗಿ ತರಬೇತಿ |
1.00 |
1.00 |
1.00 |
3 |
ಗಿರಿಜನ ಉಪಯೋಜನೆ ( ರಾಜ್ಯ) |
1.42 |
1.42 |
1.42 |
ಒಟ್ಟು |
2.42 |
2.42 |
2.42 |
ತೋಟಗಾರಿಕೆ ಉಪನಿರ್ದೇಶಕರು
ಜಿಲ್ಲಾ ಪಂಚಾಯತ್, ಉಡುಪಿ
2020-21 ನೇ ಸಾಲಿನ ವಿವಿದ ರಾಜ್ಯವಲಯ ಯೋಜನೆಗಳ ಖರ್ಚಿನ ವಿವರ (31-03-2021 ರ ಅಂತ್ಯಕ್ಕೆ) ರೂ.ಲಕ್ಷಗಳಲ್ಲಿ
ಕ್ರ.ಸಂ |
ಯೊಜನೆಗಳ ವಿವರ |
ವಾರ್ಷಿಕ ಆರ್ಥಿಕ ಗುರಿ |
ಬಿಡುಗಡೆಯಾದ ಅನುದಾನ |
ಖರ್ಚು |
1 |
ನಿರ್ದೇಶನ ಮತ್ತು ಆಡಳಿತ |
24.78 |
24.78 |
23.87 |
2 |
ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಕಾಯ್ದೆ-2013 ರಡಿ ಬಳಕೆಯಾಗದೆ ಇರುವ ಮೊತ್ತ |
11.00 |
11.00 |
11.00 |
3 |
ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ |
75.35 |
75.35 |
75.35 |
4 |
ಕೃಷಿ ಕ್ಷೇತ್ರ ಮತ್ತು ಸಸ್ಯವಾಟಿಕೆಗಳ ಅಭಿವೃದ್ಧಿ ಮತ್ತು ನಿರ್ವಹಣೆ |
60.00 |
60.00 |
60.00 |
5 |
ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆ |
11.00 |
11.00 |
10.99 |
6 |
ಮಧುವನ ಹಾಗು ಜೇನು ಸಾಕಾಣೆ ಯೋಜನೆ |
10.00 |
10.00 |
9.99 |
ಒಟ್ಟು |
192.13 |
192.13 |
191.20 |
ತೋಟಗಾರಿಕೆ ಉಪನಿರ್ದೇಶಕರು
ಜಿಲ್ಲಾ ಪಂಚಾಯತ್, ಉಡುಪಿ
2020-21 ನೇ ಸಾಲಿನ ವಿವಿದ ಕೇಂದ್ರವಲಯ ಯೋಜನೆಗಳ ಖರ್ಚಿನ ವಿವರ (31-03-2021 ರ ಅಂತ್ಯಕ್ಕೆ) ರೂ.ಲಕ್ಷಗಳಲ್ಲಿ
ಕ್ರ.ಸಂ |
ಯೊಜನೆಗಳ ವಿವರ |
ವಾರ್ಷಿಕ ಆರ್ಥಿಕ ಗುರಿ |
ಬಿಡುಗಡೆಯಾದ ಅನುದಾನ |
ಖರ್ಚು |
1 |
ಪರಂಪರಾಗತ ಕೃಷಿ ವಿಕಾಸ ಯೋಜನೆ |
13.25 |
13.25 |
13.25 |
2 |
ಸಾಮರ್ಥ್ಯವುಳ್ಳ ರಾಜ್ಯಗಳಲ್ಲಿ ಎಣ್ಣೆ ತಾಳೆ ವ್ಯವಸಾಯ ಯೋಜನೆ |
19.58 |
13.79 |
7.76 |
3 |
ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ |
219.01 |
191.24 |
191.23 |
4 |
ಉತ್ಪಾದನಾ ಸುದಾರಣಾ ಕಾರ್ಯಯೋಜನೆಗಾಗಿ ತೆಂಗಿನಲ್ಲಿ ಸಂಯೋಜಿತ ಬೇಸಾಯ |
68.70 |
68.71 |
68.70 |
5 |
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ |
188.90 |
188.35 |
188.34 |
6 |
ಕೃಷಿ ಯಾಂತ್ರೀಕರಣ ಉಪಮಿಷನ್ |
8.00 |
8.00 |
7.99 |
7 |
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ |
37.00 |
20.01 |
10.68 |
ಒಟ್ಟು |
554.44 |
503.35 |
487.95 |